


ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು, ಮಾದಕ ವಸ್ತು ಸೇವನೆ ಮಾಡಿದ ಇಬ್ಬರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 169ರ ಮೂಳೂರು ಗ್ರಾಮದ ಪೊಳಲಿ ದ್ವಾರದ ಬಳಿ ಆರೋಪಿಗಳಾದ ಬಂಟ್ವಾಳ ಬೆಂಜನಪದವಿನ ರಕ್ಷಿತ್ (23), ಅಕ್ಷಯ್ ಬಿ. (23) ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇವರಿಂದ 60 ಸಾವಿರ ರು. ಮೌಲ್ಯದ 1,107 ಗ್ರಾಂ ಗಾಂಜಾ, ಡಿಜಿಟಲ್ ತೂಕ ಮಾಪಕ, 2 ಮೊಬೈಲ್ ಫೋನ್, ಹೋಂಡಾ ಆಕ್ಟಿವಾ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಮಾದಕ ವಸ್ತು ಸೇವಿಸಿದ್ದ ಇಬ್ಬರ ಬಂಧನ:


ಬೈಕಂಪಾಡಿಯ ಶ್ರೀದ್ವಾರ ಹೊಟೇಲ್ ಬಳಿ ಮಾದಕ ವಸ್ತು ಸೇವಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಅಕ್ಷಯ್ (31), ಕದ್ರಿ ಪಾರ್ಕ್ ಬಳಿ ಸುರತ್ಕಲ್ ಕೃಷ್ಣಾಪುರ ನಿವಾಸಿ ಅಮರನಾಥ ಶೆಟ್ಟಿ (40) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.








