ಮಂಗಳೂರು ಕಾರಾಗೃಹದ ಮೇಲೆ ಪೊಲೀಸರ ಮಿಂಚಿನ ದಾಳಿ: 9 ಕೈದಿಗಳಿಂದ 10 ಸ್ಮಾರ್ಟ್‌ಫೋನ್ ವಶಕ್ಕೆ

 ನಾಗರಿಕರಿಗೆ ಮಾತ್ರ ಜೈಲಿನ ಮೊಬೈಲ್ ಜಾಮರ್ ಸಮಸ್ಯೆ, ಕೈದಿಗಳು ನೆಟ್ವರ್ಕ್ ವ್ಯಾಪ್ತಿಯಲ್ಲಿ

​ಮಂಗಳೂರು: ಕಾರಾಗೃಹದಲ್ಲಿದ್ದುಕೊಂಡೇ ಸ್ಮಾರ್ಟ್ ಫೋನ್ ಬಳಸುತ್ತಿದ್ದ ವಿಚಾರಣಾಧೀನ ಖೈದಿಗಳಿಗೆ ಮಂಗಳೂರು ನಗರ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಜಿಲ್ಲಾ ಕಾರಾಗೃಹದ ಎ-ಬ್ಲಾಕ್ ಮೇಲೆ ದಿಢೀರ್ ದಾಳಿ ನಡೆಸಿದ ಖಾಕಿ ಪಡೆ, ಕೈದಿಗಳ ಬಳಿಯಿದ್ದ ಬರೋಬ್ಬರಿ 10 ಸ್ಮಾರ್ಟ್‌ಫೋನ್‌ಗಳನ್ನು ವಶಕ್ಕೆ ಪಡೆದಿದೆ.

​ಜೈಲಿನೊಳಗೆ ನಿಷೇಧಿತ ಮೊಬೈಲ್ ಬಳಕೆಯಾಗುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಕಾರಾಗೃಹದ ಮೂಲೆ ಮೂಲೆಯನ್ನೂ ಜಾಲಾಡಿದ ಪೊಲೀಸರಿಗೆ 9 ಆರೋಪಿಗಳ ಬಳಿ ಬೆಲೆಬಾಳುವ ಮೊಬೈಲ್‌ಗಳು ಪತ್ತೆಯಾಗಿವೆ.

​ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾದ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ (ಜುಟ್ಟು ಅಸ್ಫಕ್) ಹಾಗೂ ಅರ್ಷದ್. ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿತರಾಗಿರುವ ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಮತ್ತು ಅಬ್ದುಲ್ ಸಾದೀಕ್, ಕಂಕನಾಡಿ ನಗರ ಠಾಣೆಯ ಕೋಕಾ ಪ್ರಕರಣದ ಆರೋಪಿ ಅರ್ಫಜ್ ಬಳಿ ಸ್ಮಾರ್ಟ್ ಫೋನ್ ಪತ್ತೆಯಾಗಿದೆ.

​ಈ ಫೋನ್‌ಗಳು ಜೈಲಿನೊಳಗೆ ತಲುಪಿದ್ದು ಹೇಗೆ?
ಜೈಲಿನಲ್ಲಿದ್ದುಕೊಂಡೇ ಹೊರಗಿನ ಯಾರಿಗೆ ಸ್ಕೆಚ್ ಹಾಕಲಾಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೈಲಿನಲ್ಲಿ ಈಗಾಗಲೇ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಇದರಿಂದ ಜೈಲಿನ ಹೊರಗಿನ ನಾಗರಿಕರಿಗೆ ನೆಟ್ವರ್ಕ್ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಕೈದಿಗಳಿಗೆ ಮಾತ್ರ ನೆಟ್ವರ್ಕ್ ಹೇಗೆ ಸಿಗುತ್ತಿದೆ ಎನ್ನುವುದೇ ಯಕ್ಷ ಪ್ರಶ್ನೆ.

LEAVE A REPLY

Please enter your comment!
Please enter your name here