ಜನರ ಆಚರಣೆಯ ಹಕ್ಕಿನ ಮೇಲಿನ ದಾಳಿ: ಬಿ.ಕೆ ಇಮ್ತಿಯಾಜ್ 

ಮಂಗಳೂರು: ಕೃಷ್ಣಾಷ್ಟಮಿ ಹಬ್ಬದ ವಿಶೇಷ ದಿನಗಳಲ್ಲಿ ನಗರಕ್ಕೆ ಹೊರ ಜಿಲ್ಲೆಗಳಿಂದ ವ್ಯಾಪಾರಕ್ಕೆ ಬಂದ ರೈತರು ಮತ್ತು ಹೂ ವ್ಯಾಪಾರಿಗಳ ಮೇಲೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ದಾಳಿ ನಡೆಸಿರುವುದು ಖಂಡನಾರ್ಹ ಕ್ರಮ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದ್ದಾರೆ.

ಹಾಸನ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ತರುವ ಹೂವುಗಳನ್ನು ಪೂಜೆಗೆ ಬಳಸಲಾಗುತ್ತಿದೆ. ರೈತರೇ ನೇರ ಮಾರಾಟಕ್ಕೆ ಬರುವುದರಿಂದ ಜನರಿಗೂ ಕಡಿಮೆ ಬೆಲೆಗೆ ಹೂವು ಸಿಗುತ್ತಿದೆ. ಪಾಲಿಕೆ ಆಯುಕ್ತರು ನಿರ್ದಿಷ್ಟ ಕೆಲವು ವ್ಯಕ್ತಿಗಳು ನೀಡುವ ದೂರಿಗೆ ಮಾತ್ರ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಹಬ್ಬದ ದಿನಗಳಲ್ಲೂ ಯೋಚಿಸಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ದುಡುಕುತ್ತಿರುವುದು ಖಂಡನೀಯ ಎಂದರು.

ಸಂಡೆ ಬಜಾರ್ ವ್ಯಾಪಾರವನ್ನು ವಿರೋಧಿಸುವ ಮನಸ್ಥಿತಿಯ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೂವಿನ ವ್ಯಾಪಾರಕ್ಕೂ ಆಕ್ಷೇಪ ವ್ಯಕ್ತಪಡಿಸಿ ದಾಳಿ ನಡೆಸಲು ಪಾಲಿಕೆ ಅಧಿಕಾರಿಗಳನ್ನು ಪ್ರೆರೇಪಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಮತ್ತೊಂದು ಪ್ರಯತ್ನ ಎಂದು ಬಿ.ಕೆ. ಇಮ್ತಿಯಾಜ್ ಹೇಳಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಯಾಕೆ ಮೌನವಾಗಿದ್ದಾರೆ ಎಂದೂ ಅವರು ಪ್ರಶ್ನಿಸಿದ್ದಾರೆ

LEAVE A REPLY

Please enter your comment!
Please enter your name here