ನಾರಾಯಣ ಗುರು ನಿಗಮಕ್ಕೆ 2500 ಕೋಟಿ ರು. ಬಿಡುಗಡೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಮನವಿ

ಮಂಗಳೂರು: ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಶ್ರೀನಾರಾಯಣ ಗುರು ವಿಚಾರ ವೇದಿಕೆಯ ಮುಖಂಡರು ಭೇಟಿಯಾಗಿ ಸಮಾಜದ ಬಹುಕಾಲದ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.

ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಐದು ವರ್ಷಗಳಲ್ಲಿ ನೀಡುತ್ತೇವೆಂದು ಭರವಸೆ ನೀಡಿರುವ 2500 ಕೋಟಿ ರು. ನಿಧಿ ಬಿಡುಗಡೆ ಮಾಡಬೇಕು. ಕನಕ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿಗೆ ಸರ್ಕಾರಿ ರಜೆ ಇರುವಂತೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಗೂ ಸರ್ಕಾರಿ ರಜೆ ಘೋಷಿಸಬೇಕು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ- ಚೆನ್ನಯರ ಹೆಸರು ಇಡಲು ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಜನಸಂಖ್ಯಾ ಆಧಾರದ ಮೇಲೆ ಸಮಾಜಕ್ಕೆ ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಿಗಬೇಕಾದ ಅವಕಾಶಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ನಿಯೋಗದಲ್ಲಿ ವೇದಿಕೆಯ ಸತ್ಯಜಿತ್ ಸುರತ್ಕಲ್ ಹಾಗೂ ಜಿಲ್ಲಾ ಪ್ರಮುಖರು ಇದ್ದರು.

LEAVE A REPLY

Please enter your comment!
Please enter your name here