


ಮಂಗಳೂರು: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಶ್ರೀ ರಾಧಾಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.





ಮಹಾಸಭೆಯ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ ಅವರ ಗೈರು ಹಾಜರಿಯಲ್ಲಿ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ವಹಿಸಿದ್ದರು.


ಆರ್ಥಿಕ ವರ್ಷ 2025-26 ರಲ್ಲಿ ಸಂಘವು 20 ಕೋಟಿ ರು. ವ್ಯವಹಾರ ದಾಖಸಿದ್ದು 7.20 ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಸಹಕಾರ ಸಂಘದ ಸದಸ್ಯರ ಪಾಲು ಬಂಡವಾಳದ ಮೇಲೆ ಶೇ. 11ರಂತೆ ಡಿವಿಡೆಂಡ್ ಘೋಷಿಸಲಾಯಿತು. ಸಹಕಾರ ಸಂಘದ ಶಾಖಾ ವ್ಯವಸ್ಥಾಪಕಿ ವೀಣಾ ಕುಮಾರಿ ಬಿ. ಅವರು ಮಹಾಸಭೆಯ ಕಾರ್ಯಸೂಚಿಯನ್ನು ಓದಿ ಸಭೆಯ ಅನುಮೋದನೆ ಪಡೆದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಎಚ್. ಕಳೆದ ಆರ್ಥಿಕ ವರ್ಷದ ಪರಿಶೋಧಿತ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಸಹಕಾರ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರಾದ ವಿಶ್ವನಾಥ ಗಟ್ಟಿ, ಕಾಶೀನಾಥ್ ಪುತ್ರನ್, ಶ್ರೀನಿವಾಸ ಕಣ್ವತೀರ್ಥ, ಸ್ಟ್ಯಾನಿ ಡಿಸೋಜ, ಲೀಲಾವತಿ ಕೆ, ಮೃಣಾಲಿನಿ, ಕಿಶೋರ್ ಕುಟಿನ್ಹ ಇದ್ದರು.








