ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಮೃತ ಮನೀಶ್ ಕುಟುಂಬಕ್ಕೆ 1.20 ಕೋಟಿ ರು. ಪರಿಹಾರ ಪ್ರಕಟಿಸಿದ ಕಂಪೆನಿ

ಮಂಗಳೂರು: ನಗರದ ಹೊರವಲಯದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್.) ಸಂಸ್ಥೆಯ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಬುಧವಾರ ಸಂಭವಿಸಿದ ಸ್ಫೋಟದಿಂದ ಮೃತಪಟ್ಟ ಗುತ್ತಿಗೆ ನೌಕರ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರು. ಆರ್ಥಿಕ ನೆರವನ್ನು ಎಂಆರ್‌ಪಿಎಲ್ ಆಡಳಿತ ಮಂಡಳಿ ಘೋಷಿಸಿದೆ.

ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ ನೇರವಾಗಿ 90 ಲಕ್ಷ ರು. ಆರ್ಥಿಕ ಸಹಾಯಧನ ನೀಡಲಾಗುವುದು, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಅಂದಾಜು 10 ಲಕ್ಷ ರು., ಕಾರ್ಮಿಕರ ಪರಿಹಾರ ಪಾಲಿಸಿಯಡಿ ಅಂದಾಜು 20 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ಗುತ್ತಿಗೆ ಕಾರ್ಮಿಕರಿಗೆ ಮೆಡಿಕ್ಲೈಮ್ ಇನ್ಶೂರೆನ್ಸ್:

ದ್ವಿತೀಯ ಹಂತದ/ ಗುತ್ತಿಗೆ ಕಾರ್ಮಿಕರಿಗೆ ಮೆಡಿಕ್ಲೈಮ್ ವಿಮಾ ಸೌಲಭ್ಯ ಒದಗಿಸುವ ಬೇಡಿಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಸಂಸದರ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಾಲ್ಕು ವಾರಗಳೊಳಗೆ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಂಆರ್‌ಪಿಎಲ್ ತಿಳಿಸಿದೆ.

LEAVE A REPLY

Please enter your comment!
Please enter your name here