ಇವಿ ರಿಕ್ಷಾಗಳ ಪರ್ಮಿಟ್, ವಲಯ ವಿಂಗಡಣೆ ಸಮಸ್ಯೆ ಬಗೆಹರಿಸಲು ಒತ್ತಾಯ

ಮಂಗಳೂರು: ಇವಿ ಆಟೋರಿಕ್ಷಾಗಳಿಗೆ ಪರ್ಮಿಟ್ ವಿತರಣೆ ಹಾಗೂ ವಲಯಗಳ ವಿಂಗಡಣೆ ಸಮಸ್ಯೆಯನ್ನು ಜಿಲ್ಲಾಧಿಕಾರಿ ಕೂಡಲೆ ಬಗೆಹರಿಸಬೇಕು ಎಂದು ಇವಿ ಆಟೋರಿಕ್ಷಾ ಚಾಲಕ-ಮಾಲೀಕರ ಸಂಘಟನೆ ಒತ್ತಾಯಿಸಿದೆ.

ಪರ್ಮಿಟ್ ವಿತರಣೆ ಹಾಗೂ ವಲಯಗಳ ವಿಂಗಡಣೆ ಸಮಸ್ಯೆಯನ್ನು ಜಿಲ್ಲಾಧಿಕಾರಿ ಕೂಡಲೆ ಬಗೆಹರಿಸಬೇಕು ಎಂದು ಇವಿ ಆಟೋರಿಕ್ಷಾ ಚಾಲಕ-ಮಾಲೀಕರ ಸಂಘಟನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಗ್ರೀನ್ ಸಿಟಿ ನಿಕಟಪೂರ್ವ ಅಧ್ಯಕ್ಷ ಪ್ರಜೇಶ್, ೨೦೨೫ ಅಕ್ಟೋಬರ್ ೩೦ರೊಳಗೆ ಬಂದಿರುವ ಎಲ್ಲ ಇವಿ ಆಟೋಗಳಿಗೆ ಮಂಗಳೂರು ನಗರದಲ್ಲಿ ಸಂಚರಿಸಲು ಪರ್ಮಿಟ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಮಾಂತರ ವಿಳಾಸ ಹೊಂದಿರುವ ಹಾಗೂ ಮಹಿಳೆಯರ ಹೆಸರಿನಲ್ಲಿರುವ ಹಲವು ವಾಹನಗಳ ಪರ್ಮಿಟ್‌ಗಳನ್ನು ಬಾಕಿ ಇರಿಸಿದ್ದು, ಇದೀಗ ಗ್ರಾಮಾಂತರ ಪರ್ಮಿಟ್ ನೀಡಿ ಕೋರ್ಟ್ ಆದೇಶ ಬರುವವರೆಗೆ ಮಂಗಳೂರು ನಗರದಲ್ಲಿ ಸಂಚರಿಸಬಹುದು ಎಂಬ ಮುದ್ರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಸಾಲ ಮಾಡಿ, ಚಿನ್ನಾಭರಣ ಅಡಮಾನವಿಟ್ಟು ಹಲವರು ಇವಿ ಆಟೋ ಖರೀದಿಸಿ ಮಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇಪದೇ ನಿಯಮ ಬದಲಿಸುವ ಮೂಲಕ ಚಾಲಕರ ಬದುಕಿನೊಂದಿಗೆ ಅಧಿಕಾರಿಗಳು ಆಟವಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಟೀಂ ಗ್ರೀನ್ ಸಿಟಿ ಅಧ್ಯಕ್ಷ ಮೋಹನ್‌ದಾಸ್, ಸಂಘಟನೆಯ ಕಿರಣ್ ಸಿ.ಕೆ., ಕ್ಲೆಮೆಂಟ್ ಡಿಸೋಜ, ಮೈಕಲ್, ಮಹೇಂದ್ರ ಕುಮಾರ್, ಪವನ್ ಕುಮಾರ್, ರಾಮ ದೇವಾಡಿಗ, ರಾಧಾಕೃಷ್ಣ ಇದ್ದರು.

LEAVE A REPLY

Please enter your comment!
Please enter your name here