


17ರಂದು ಶ್ರೀ ಡಾ.ನಿರ್ಮಂಗಳೂರು: ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್- ಎಸಿಸಿಇ (ಇಂಡಿಯಾ) ವತಿಯಿಂದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಸೆ.17ರಂದು ಗೌರವ ಫೆಲೋಶಿಪ್ ಪ್ರದಾನ ಮಾಡಲಾಗುವುದು ಎಂದು ಎಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ತಿಳಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್, ಶಿಕ್ಷಣ ಸಂಸ್ಥೆಗಳ ನಿರ್ಮಾಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಸ್ವಾಮೀಜಿಯವರಿಗೆ ಸೆ.17ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್ನಲ್ಲಿ ಎಸಿಸಿಇ ವತಿಯಿಂದ ನಡೆಯಲಿರುವ ಎಂಜಿನಿಯರ್ಸ್ ಡೇ ಆಚರಣೆ ಸಂದಭದಲ್ಲಿ ಈ ಫೆಲೋಶಿಪ್ ಪ್ರದಾನ ಮಾಡಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಸಿ.ಎನ್. ಅವರು ಫೆಲೋಶಿಪ್ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.


ಸೆ.15ರಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಎಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ಎಸಿಸಿಇ(ಐ) ಈ ಹಿಂದೆ ಮಾಜಿ ಪ್ರಧಾನ ಮಂತ್ರಿ ಮತ್ತು ಸಿವಿಲ್ ಎಂಜಿನಿಯರ್ ಎಚ್.ಡಿ.ದೇವೇಗೌಡ ಅವರಿಗೂ ಗೌರವ ಫೆಲೋಶಿಪ್ ಪ್ರದಾನ ಮಾಡಿತ್ತು. ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಗೌರವ ಫೆಲೋಶಿಪ್ ಪ್ರದಾನ ಮಾಡುತ್ತಿರುವುದು ಎಂಜಿನಿಯರಿಂಗ್ ವಲಯಕ್ಕೆ ಹೆಮ್ಮೆಯ ಕ್ಷಣ. ಎಂಜಿನಿಯರಿಂಗ್ ಜ್ಞಾನ, ಶಿಕ್ಷಣ, ನಾಯಕತ್ವ ಮತ್ತು ಸಮಾಜಸೇವೆಯ ಸಾರ್ಥಕ ಸಂಯೋಜನೆಗೆ ಸಲ್ಲಿಸುತ್ತಿರುವ ಗೌರವ ಇದಾಗಿದೆ ಎಂದರು.
ಮಂಗಳೂರಲ್ಲಿ 19ರಂದು ಎಂಜಿನಿಯರ್ಸ್ ಡೇ:
ಮಂಗಳೂರಿನಲ್ಲಿ ಸೆ.19ರಂದು ರೆಡ್ ಕ್ರಾಸ್ ಭವನದಲ್ಲಿ ಎಂಜಿನಿಯರ್ಸ್ ಡೇ ಆಚರಣೆ ನಡೆಯಲಿದೆ. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದು ಇಬ್ಬರು ಎಂಜಿನಿಯರ್ಗಳನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಮಂಗಳೂರು ಘಟಕದ ಅಧ್ಯಕ್ಷ ಅರುಣ್ ರಾಜ್, ಪ್ರಮುಖರಾದ ವಿಜಯ್ ವಿಷ್ಣುಮಯ್ಯ, ಸುಬ್ರಹ್ಮಣ್ಯ ಪ್ರಭು, ಚೆನ್ನಗಿರಿ ಗೌಡ, ಉಜ್ವಲ್ ಡಿಸೋಜ, ಭರತ್ ಇದ್ದರು.








