ಪೂರ್ಣಿಮಾ ರವಿಗೆ ಪಿಎಚ್.ಡಿ ಪದವಿ

ಮಂಗಳೂರು: ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷಾ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಿಮಾ ರವಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ.

ಅವರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ನಯನಾ ಕೆ.ಎಸ್. ಮಾರ್ಗದರ್ಶನದಡಿ ತಯಾರಿಸಿದ- ಅನ್ ರಾವೆಲ್ಲಿಂಗ್ ದಿ ಲೈವ್ಸ್ ಆಫ್ ದೇವದಾಸಿಸ್; ಎ ಕ್ರಿಟಿಕಲ್ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನಲ್ ಅಂಡ್ ನಾನ್ ಫಿಕ್ಷನಲ್ ನರೇಟಿವ್ಸ್ ಎನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.

ತಮ್ಮ ಸಂಶೋಧನೆಯ ಭಾಗವಾಗಿ ಪೂರ್ಣಿಮಾ ರವಿ ಅವರು ನಿರ್ದೇಶಿಸಿದ ಗಾಡ್ಸ್ ವೈವ್ಸ್- ಮೆನ್ಸ್ ಸ್ಲೇವ್ಸ್ ಎಂಬ ಸಾಕ್ಷ್ಯಚಿತ್ರವು ಬೆಳಗಾವಿಯ ಸುವರ್ಣ ವಿಧಾನಸೌಧ ಸೇರಿದಂತೆ ರಾಜ್ಯ ಹಾಗೂ ದೇಶದ ಹಲವೆಡೆ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು. ಉಪ್ಪಿನಂಗಡಿಯ ರವಿ ನಾರಾಯಣ ನೂಜಿಬೈಲು ಅವರ ಪತ್ನಿಯಾಗಿರುವ ಪೂರ್ಣಿಮಾ, ಕಳತ್ತಜೆ ರಾಮಕೃಷ್ಣ ಭಟ್ ಬಿ. ಹಾಗೂ ವಾಣಿ ಆರ್. ಭಟ್ ಅವರ ಪುತ್ರಿ.

LEAVE A REPLY

Please enter your comment!
Please enter your name here