ಮಂಗಳೂರಿನಲ್ಲಿ ರಾಷ್ಟ್ರೀಯ ಅಭಿಯಂತರರ ದಿನಾಚರಣೆ – ಎನ್ಐಟಿಕೆ ನಿವೃತ್ತ ಪ್ರಾಧ್ಯಾಪಕ ಕಟ್ಟಾ ವೆಂಕಟರಮಣಗೆ ಆದರ್ಶ ಎಂಜಿನಿಯರ್ ಪ್ರಶಸ್ತಿ ಪ್ರದಾನ

ಮಂಗಳೂರು: ದೇಶದ ಸರ್ವತೋಮುಖ ಪ್ರಗತಿ ಮತ್ತು ತಾಂತ್ರಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುವ ಎಂಜಿನಿಯರ್‌ಗಳ ಸಾಧನೆಯನ್ನು ಸ್ಮರಿಸುವ ದಿನವನ್ನು ರಾಷ್ಟ್ರೀಯ ಎಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತಿದೆ ಎಂದು ನಗರದ ಸಿವಿಲ್ ಎಂಜಿನಿಯರ್ ಹಾಗೂ ರೋಟರಿ ಜಿಲ್ಲಾ 3181ರ ದಂಡಾಧಿಕಾರಿ ಏಕನಾಥ್ ದಂಡಕೇರಿ ಹೇಳಿದ್ದಾರೆ.

ರೋಟರಿ ಮಂಗಳೂರು ಸಿಟಿ ಸಂಸ್ಥೆ ಆಶ್ರಯದಲ್ಲಿ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿ ವಲಯ 2ರ ಸಹಾಯಕ ಗವರ್ನರ್, ಎಂಜಿನಿಯರ್ ಸಂದೀಪ್ ರಾವ್ ಇಡ್ಯಾ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭ ಎನ್.ಐ.ಟಿ.ಕೆ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕಟ್ಟಾ ವೆಂಕಟರಮಣ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಳನ್ನು ಪರಿಗಣಿಸಿ ರೋಟರಿ ಸಂಸ್ಥೆಯ ‘ಆದರ್ಶ ಎಂಜಿನಿಯರ್’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷ ಸುಮಿತ್ ರಾವ್ ಅವರು ಪ್ರಶಸ್ತಿ ವಿಜೇತರ ಪರಿಚಯ ಸಾಧನೆಯನ್ನು ವಿವರಿಸಿ ಅಭಿನಂದನಾ ಭಾಷಣ ಮಾಡಿದರು.

ಸಂಸ್ಥೆಯ ಅಧ್ಯಕ್ಷೆ ಸಜ್ನಾ ಭಾಸ್ಕರ್‌ ಸ್ವಾಗತಿಸಿ, ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಕಾರ್ಯದರ್ಶಿ ನಿತಿನ್ ದೇವಾಡಿಗ ವರದಿ ಮಂಡಿಸಿ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸ್ಥಾಪನಾಧ್ಯಕ್ಷ ಡಾ. ರಂಜನ್, ಮಾಜಿ ಅಧ್ಯಕ್ಷ ಬಸವ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here