ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಸಲ ಕಾಲಿಟ್ಟ ಜನಾರ್ದನ ಪೂಜಾರಿ! – ತಮ್ಮ ಶಿಷ್ಯ ಪದ್ಮರಾಜ್ ಪದಗ್ರಹಣಕ್ಕೆ ಆಗಮಿಸಿದ ಹಿರಿಯ ಕಾಂಗ್ರೆಸಿಗ

ಮಂಗಳೂರು: ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ 2017ರಲ್ಲಿ ಉದ್ಘಾಟನೆಯಾಗಿ 9 ವರ್ಷ ಕಳೆದಿದ್ದರೂ, ಇದುವರೆಗೂ ಕಚೇರಿಗೆ ಕಾಲಿಡದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಇದೀಗ ತಮ್ಮ ಶಿಷ್ಯ- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿ ಗಮನ ಸೆಳೆದರು.

ಪದ್ಮರಾಜ್ ಆರ್. ಪೂಜಾರಿ ಅವರ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿತ್ತು. ತಮ್ಮ ಶಿಷ್ಯನ ಪಟ್ಟಾಭಿಷೇಕದ ಶುಭಗಳಿಗೆಗೆ ಸಾಕ್ಷಿಯಾಗುವ ಇಚ್ಛೆಯಿಂದ ಜನಾರ್ದನ ಪೂಜಾರಿ ಕೊನೆಗೂ ಕಚೇರಿಗೆ ಕಾಲಿಟ್ಟಿದ್ದಾರೆ.

2017ರಲ್ಲಿ ಕಚೇರಿ ಉದ್ಘಾಟನೆ ಸಂದರ್ಭ ಜನಾರ್ದನ ಪೂಜಾರಿ ಗೈರು ಹಾಜರಾಗಿದ್ದರು. ಇದಕ್ಕೆ ಪಕ್ಷದೊಳಗಿನ ಆಂತರಿಕ ಮನಸ್ತಾಪ ಕಾರಣ ಎಂಬ ಮಾತು ಕೇಳಿಬಂದಿತ್ತು. ನಂತರದ ದಿನಗಳಲ್ಲಿ ವಯೋ ಸಹಜ ಅಸ್ವಸ್ಥತೆಗೆ ಈಡಾದ ಜನಾರ್ದನ ಪೂಜಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ದೂರವೇ ಉಳಿದಿದ್ದರು. ಈಗ ತಮ್ಮ 88ನೇ ವಯಸ್ಸಿನಲ್ಲಿ ವಯೋ ಸಹಜ ಅನಾರೋಗ್ಯದ ನಡುವೆಯೂ ಬಂದು ಶಿಷ್ಯನನ್ನು ಹರಸಿದ್ದಾರೆ.

LEAVE A REPLY

Please enter your comment!
Please enter your name here