ಸೆ.25ರಿಂದ ಮಂಗಳೂರಿನಲ್ಲಿ ಬಿಎನ್ಐ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ – ಒಂದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಬ್ರ್ಯಾಂಡ್ ಗಳ ಪ್ರದರ್ಶನ

ಮಂಗಳೂರು: ಬಿಎನ್‌ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಎನ್‌ಐ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ 2026, ಸೆ.25ರಿಂದ 27ರವರೆಗೆ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.

ಮೂರು ದಿನಗಳ ಎಕ್ಸ್‌ಪೋದಲ್ಲಿ 120ಕ್ಕೂ ಹೆಚ್ಚು ಸ್ಟಾಲ್‌ಗಳು ಭಾಗವಹಿಸಲಿದ್ದು, ವ್ಯಾಪಾರ, ಜೀವನ ಶೈಲಿ, ಆಹಾರ, ಕುಟುಂಬ, ಶಾಪಿಂಗ್ ಮತ್ತು ಬಿಸಿನೆಸ್ ನೆಟ್‌ವರ್ಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಬ್ರ್ಯಾಂಡ್‌ಗಳು ಒಂದೇ ವೇದಿಕೆ ಲಭ್ಯ. ಬಿಎನ್‌ಐ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ ಕೇವಲ ಒಂದು ವಾಣಿಜ್ಯ ಪ್ರದರ್ಶನವಲ್ಲ, ವ್ಯಾಪಾರಿಗಳು, ಗ್ರಾಹಕರು, ಕುಟುಂಬಗಳು ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಒಂದು ದೊಡ್ಡ ಅವಕಾಶ ಎಂದು ಬಿಎನ್‌ಐ ಮಂಗಳೂರು-ಉಡುಪಿ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್.ಶರ್ಮ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಕ್ಸ್‌ಪೋದಲ್ಲಿ ಬ್ಯುಸಿನೆಸ್, ಜೀವನ ಶೈಲಿ, ಆಹಾರ, ಕುಟುಂಬ, ಕಲೆ ಮತ್ತು ಸಂಸ್ಕೃತಿ, ಆಟೊ ಸೇರಿದಂತೆ ವಿವಿಧ ವಲಯಗಳನ್ನು ರೂಪಿಸಲಾಗಿದೆ. ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು, ಹೊಸ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಹೊಸ ಬ್ಯುಸಿನೆಸ್ ಅವಕಾಶಗಳನ್ನು ಕಂಡುಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ. ಕುಟುಂಬ ಸಮೇತರಾಗಿ ಆಗಮಿಸುವ ಸಾರ್ವಜನಿಕರಿಗೆ ಶಾಪಿಂಗ್, ಆಹಾರ, ಮನರಂಜನೆ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಅನುಭವ ನೀಡುವುದು ನಮ್ಮ ಉದ್ದೇಶವಾಗಿದೆ. ಮೂರೂ ದಿನವೂ ಉಚಿತ ಪ್ರವೇಶ ಇರಲಿದೆ ಎಂದರು.

ಈ ಬಾರಿ ಮಕ್ಕಳ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಮತ್ತು ಚೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಚೇರ್ಮನ್ ಮೋಹನ್‌ರಾಜ್, ಕೋ ಚೇರ್‌ಪರ್ಸನ್ ಸುಷ್ಮಿತಾ ಕಾಮತ್, ಪಬ್ಲಿಸಿಟಿ ಇನ್‌ಚಾರ್ಜ್ ಡಾ. ಸಚಿನ್ ನಡ್ಕ, ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್, ಸುನೀಲ್‌ದತ್ ಪೈ, ಸುನೀತಾ ಡಿಸೋಜ ಇದ್ದರು.

LEAVE A REPLY

Please enter your comment!
Please enter your name here