


ಮಂಗಳೂರು: ನಗರದ ಮೆರ್ಕಾರಾ ಹಿಲ್‌ನಲ್ಲಿರುವ ಪುನರ್ ಅಭಿವೃದ್ಧಿಗೊಂಡ ಸಿಎಸ್‌ಐ ಸುಶಾಂತಿ ನಿಲಯ ಸಮುದಾಯ ಭವನ ಉದ್ಘಾಟನೆ ಸಮಾರಂಭ ಸೆ.25ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಸಿಎಸ್‌ಐ ಸುಶಾಂತಿ ದೇವಾಲಯದ ಸಭಾ ಪಾಲಕ ರೆ. ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಮುದಾಯ ಭವನ ಉದ್ಘಾಟನೆಯೊಂದಿಗೆ ಈ ಪ್ರದೇಶದ ಐತಿಹಾಸಿಕ ಕಟ್ಟಡವೊಂದರ ಸಂರಕ್ಷಣೆ ಮತ್ತು ಪುನರುಜ್ಜಿವನದ ಮಹತ್ವದ ಮೈಲಿಗಲ್ಲು ಸಾಧ್ಯವಾಗಲಿದೆ. ಸಿಎಸ್‌ಐ ಕರ್ನಾಟಕ ದಕ್ಷಿಣ ಡಯಾಸಿಸ್‌ನ ಬಿಷಪ್ ರೆ. ಹೇಮಚಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿ ರೆ.ಡಾ. ಡೆಕ್ಸ್ಟರ್ ಮಾಬೆನ್ ಹಾಗೂ ಚರ್ಚ್ ಸಭಾಪಾಲಕ ರೆ. ಸಂತೋಷ್ ಕುಮಾರ್ ಸಿಂಗ್ ಉದ್ಘಾಟಿಸಲಿದ್ದಾರೆ. ಸಂತೋಷ್ ಕುಮಾರ್ ಜೋನಸ್, ಕಿರಣ್ ಕರಾಟ್ ಹಾಗೂ ದೇವಪುತ್ರ ಕೋಟ್ಯಾನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.


ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ ಪ್ರೈ.ಲಿ. ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅವರ ಕೊಡುಗೆಯಾಗಿ ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ತಮ್ಮ ಅಗಲಿದ ತಂದೆ-ತಾಯಿಗಳಾದ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಸ್ಮರಣಾರ್ಥ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಉದ್ಯಮಿ ಸುನಿಲ್ ಜೋನಸ್ ಮಾತನಾಡಿ, ಸುಮಾರು ಏಳು ತಿಂಗಳ ಕಾಲ ಅಭಿವೃದ್ಧಿ ಕಾಮಗಾರಿ ನಡೆದಿದೆ. ಪುನರ್ ಅಭಿವೃದ್ಧಿಗೊಂಡ ಈ ಕಟ್ಟಡದಲ್ಲಿ 300 ಆಸನಗಳ ಹವಾನಿಯಂತ್ರಿತ ಸಮುದಾಯ ಭವನ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಧ್ಯಾ ಜೋನಾಸ್, ಬೆನೆಟ್ ಅಮನ್ನ, ಸಂತೋಷ್ ಕುಮಾರ್ ಜೋನಸ್ ಇದ್ದರು.







