


ಬೆಳ್ತಂಗಡಿ: ಸುದ್ದಿ ಸಮೂಹ ಸಂಸ್ಥೆಗಳ ಅಂಗವಾಗಿ ನೂತನವಾಗಿ ಮಂಗಳೂರಿನಲ್ಲಿ ಪ್ರಾರಂಭವಾಗಲಿರುವ ಸುದ್ದಿ ಮೀಡಿಯಾ ಹೌಸ್ ಮಂಗಳೂರು ಇದರ ಸಂಪಾದಕರಾಗಿ ಡಾ| ಸಂದೀಪ್ ವಾಗ್ಲೆ ನೇಮಕಗೊಂಡಿದ್ದಾರೆ. ಇವರು ಜು.1ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.


ಉಡುಪಿ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದ ಸಂದೀಪ್ ವಾಗ್ಲೆ ಅವರು ಪತ್ರಿಕೋದ್ಯಮದಲ್ಲಿ ಸುದೀರ್ಘ 22 ವರ್ಷಗಳ ಅನುಭವ ಹೊಂದಿದ್ದಾರೆ. 2004ರಿಂದ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಬೆಳಗಾವಿ, ಮಂಗಳೂರು, ಬೆಂಗಳೂರಿನಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು, ಜನರ ಸಮಸ್ಯೆಗಳ ಕುರಿತಾದ ಅವರ ಅನೇಕ ವರದಿಗಳು ಸರ್ಕಾರದ ಮಟ್ಟದಲ್ಲಿ ಚರ್ಚಿತವಾಗಿ ಗಮನ ಸೆಳೆದಿವೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಭೌತಶಾಸ, ರಸಾಯನಶಾಸ, ಗಣಿತಶಾಸದಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ ಪತ್ರಿಕೋದ್ಯಮದತ್ತ ಆಕರ್ಷಿತರಾದ ಅವರು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.





2017ರಲ್ಲಿ ಪತ್ರಿಕೋದ್ಯಮದಲ್ಲೇ ಪಿಎಚ್.ಡಿ ಪದವಿಯನ್ನೂ ಪಡೆದಿದ್ದಾರೆ.
ಕೊರಗ ಸಮುದಾಯದ ಕುರಿತಾದ ವಿಶೇಷ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿ, ಕೋಮು ಸೌಹಾರ್ದತೆಯ ಕುರಿತಾದ ವರದಿಗಾಗಿ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೂ ಡಾ. ಸಂದೀಪ್ ವಾಗ್ಲೆ ಭಾಜನರಾಗಿದ್ದಾರೆ. ಪ.ಗೋ. ಪ್ರಶಸ್ತಿಯ ಮೊತ್ತವನ್ನು ಕಡು ಬಡ ಕೊರಗ ಕುಟುಂಬವೊಂದಕ್ಕೆ ಅವರು ಹಸ್ತಾಂತರಿಸಿದ್ದರು. ಪ್ರಸ್ತುತ ಸಂದೀಪ್ ವಾಗ್ಲೆ ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ.
ಸುದ್ದಿ ಮೀಡಿಯಾ ಹೌಸ್ ಜತೆಗೆ ಸುದ್ದಿ ಅರಿವು ಕೇಂದ್ರ ಮಂಗಳೂರು ಇದರ ಯಶಸ್ಸಿಗೂ ಸಂದೀಪ್ ವಾಗ್ಲೆ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ಜುಲೈ-ಆಗಸ್ಟ್ ತಿಂಗಳಲ್ಲಿ ಸುದ್ದಿ ಮೀಡಿಯಾ ಹೌಸ್ ಬೆಂಗಳೂರು ಮತ್ತು ಸುದ್ದಿ ಅರಿವು ಕೇಂದ್ರ ಬೆಂಗಳೂರು ಪ್ರಾರಂಭವಾಗಲಿದೆ.
ಸುದ್ದಿ ಮೀಡಿಯಾ ಹೌಸ್, ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ಗೆ ಮಾಧ್ಯಮ ಶಕ್ತಿ ನೀಡಲಿದ್ದು, ಮಂಗಳೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಸುದ್ದಿ ವೆಬ್ಸೈಟ್ ಮತ್ತು ಸುದ್ದಿ ಚಾನೆಲ್ ಪ್ರಾರಂಭವಾಗಲಿದೆ. ಅದರೊಂದಿಗೆ ಎಲ್ಲಾ ಮಾಧ್ಯಮಗಳೊಂದಿಗೆ ಕೊಲಾಬ್ರೇಷನ್ನಲ್ಲಿ ಕೆಲಸ ಮಾಡಲಿದ್ದು ಮೀಡಿಯಾಗೆ ಬೇಕಾದ ಕಂಟೆಂಟ್ಗಳನ್ನು ಸಂಗ್ರಹಿಸಿ ಬೇಡಿಕೆ ಇದ್ದವರಿಗೆ ನೀಡಲಿದೆ. ಈ ಕೆಲಸ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಈ ಮೇಲಿನ ಕೆಲಸಗಳಿಗಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಆಸಕ್ತರು ಸುದ್ದಿ ಕಚೇರಿಯನ್ನು ಸಂಪರ್ಕಿಸಬಹುದು.








