ಮಂಗಳೂರು ಅಳಿವೆಬಾಗಿಲು ಬಳಿ ಬೋಟ್ ಮುಳುಗಡೆ: 6 ಮಂದಿ ಮೀನುಗಾರರ ರಕ್ಷಣೆ

ಮಂಗಳೂರು: ಆಳ ಸಮುದ್ರ ಮೀನುಗಾರಿಕೆಗೆ ಉಳ್ಳಾಲದಿಂದ ಹೊರಟ ಬೋಟ್ ಮಂಗಳೂರಿನ ಹಳೆ ಬಂದರಿನ ಸಮೀಪ ಅಳಿವೆ ಬಾಗಿಲಿನಲ್ಲಿ ಅವಘಡಕ್ಕೀಡಾಗಿ ಮುಳುಗಿದ್ದು, ಅದರಲ್ಲಿದ್ದ ಆರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಅಳಿವೆ ಬಾಗಿಲಿನಲ್ಲಿ ಹೂಳು ಅಥವಾ ಕಲ್ಲುಗಳ ಕಾರಣದಿಂದಾಗಿ ಈ ಅವಘಡ ಸಂಭವಿಸಿರಬಹುದು. ಅಥವಾ ಭಾರೀ ಗಾಳಿ- ಅಲೆಗಳ ರಭಸಕ್ಕೆ ಸಿಲುಕಿ ಮುಳುಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಶನಿವಾರ ಸಂಜೆ 6 ಗಂಟೆಯ ವೇಳೆಗೆ ಅವಘಡ ಸಂಭವಿಸಿದೆ. ಫಜೀರಿನ ವ್ಯಕ್ತಿಯೊಬ್ಬರಿಗೆ ಸೇರಿದ ಅಯಾನ್ ಹೆಸರಿನ ಬೋಟು ಇದಾಗಿದ್ದು, ಬೋಟ್‌ನಲ್ಲಿದ್ದ ಆರು ಮಂದಿ ಕಾರ್ಮಿಕರನ್ನು ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.

ತಮ್ಮ ದೋಣಿಗಳನ್ನು ಹತ್ತಿರಕ್ಕೆ ತಂದು ಹಗ್ಗಗಳ ಸಹಾಯದಿಂದ ಆರೂ ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.

​

LEAVE A REPLY

Please enter your comment!
Please enter your name here