


ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್) ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ (ಯೋಜನೆಗಳು) ಬಿ.ಎಚ್.ವಿ. ಪ್ರಸಾದ್ ಅವರು ಒ.ಎನ್.ಜಿಸಿ. ಪೆಟ್ರೋ ಅಡಿಶನ್ಸ್ ಲಿಮಿಟೆಡ್ (ಒಪಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.





ಅವರು ತಮ್ಮ ಹೊಸ ಹುದ್ದೆಯಲ್ಲಿ, ಗುಜರಾತ್‌ನ ದಹೇಜ್‌ನಲ್ಲಿರುವ ಒಎನ್‌ಜಿಸಿ ಗ್ರೂಪ್‌ನ ಪ್ರಮುಖ ಸಂಯೋಜಿತ ಪೆಟ್ರೋಕೆಮಿಕಲ್ ಕಂಪೆನಿಯಾದ ಒಪಿಎಎಲ್ ನ್ನು ಮುನ್ನಡೆಸಲಿದ್ದಾರೆ. ಮೂಲ್ಕಿ ಮೂಲದ ಪ್ರಸಾದ್, ಪ್ರಸಿದ್ಧ ಕುಟುಂಬ ವೈದ್ಯ ದಿ.ಡಾ.ಬಿ.ಎಚ್. ಸೋಮಶೇಖರ್ ರಾವ್ ಅವರ ಪುತ್ರ ಮತ್ತು ಪ್ರಸಿದ್ಧ ಆಯುರ್ವೇದ ವೈದ್ಯ ದಿ.ಪಂಡಿತ್ ವಾಸುದೇವಯ್ಯ (ವಾಸುದೇವ್ ಭಟ್) ಅವರ ಮೊಮ್ಮಗ. ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಮೋಹನ್ ಅವರ ಸಹೋದರರೂ ಆಗಿದ್ದಾರೆ.










