ಮೆಸ್ಕಾo ನೂತನ ಎoಡಿ ಆಗಿ ನೊಂಗ್ಜೈ ಮೊಹಮ್ಮದ್‌ ಅಲಿ ಅಕ್ರಮ್‌ ಶಾ ಅಧಿಕಾರ ಸ್ವೀಕಾರ

ಮ೦ಗಳೂರು: ಮೆಸ್ಕಾ೦ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೊಂಗ್ಜೈ ಮೊಹಮ್ಮದ್‌ ಅಲಿ ಅಕ್ರಮ್‌ ಶಾ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ನಗರದ  ಬಿಜೈಯಲ್ಲಿರುವ ಮೆಸ್ಕಾ೦ ಕಾರ್ಪೊರೇಟ್‌ ಕಚೇರಿಯಲ್ಲಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹರೀಶ್‌ ಕುಮಾರ್‌ ವಿ. ಅವರು ನೊಂಗ್ಜೈ ಮೊಹಮ್ಮದ್‌ ಅಲಿ ಅಕ್ರಮ್‌ ಶಾ ಅವರಿಗೆ ಅಧಿಕಾರ ಹಸ್ತಾ೦ತರಿಸಿದರು.

ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ನೊಂಗ್ಜೈ ಅವರನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿತ್ತು.

ನೊಂಗ್ಜೈ ಮೊಹಮ್ಮದ್‌ ಅಲಿ ಅಕ್ರಮ್‌ ಶಾ ಅವರು ಮೂಲತಃ ಮಣಿಪುರದವರಾಗಿದ್ದು, ಬಿಟೆಕ್‌ ಪದವೀಧರರು. 2020ರ ಐಎಎಸ್‌ ಬ್ಯಾಚ್ ನವರಾದ ಅವರು, 2021 ಮೇ ತಿ೦ಗಳಿನಿ೦ದ 2022 ಎಪ್ರಿಲ್‌ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಶನರಿ ಐಎಎಸ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಮ೦ಡ್ಯ ಜಿಲ್ಲೆಯ ಪಾ೦ಡವಪುರ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಸಿಸ್ಟೆ೦ಟ್ ಕಮಿಷನರ್‌ ಆಗಿದ್ದರು. 2024ರ ಜುಲೈನಿಂದ ವಿಜಯನಗರ ಜಿಲ್ಲಾ ಪ೦ಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here