


ಮಂಗಳೂರು: ರಹ್ಮಾನ್ ಕೊಳತ್ತಮಜಲು ಕೊಲೆ ಆರೋಪಿಗಳಿಗೆ ಜಾಮೀನು ಹಿನ್ನೆಲೆ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಸ್ಡಿಪಿಐ ಕಾರ್ಯಕರ್ತರು ಸಂಪುಟ ಸಚಿವರ ವಾಹನಕ್ಕೆ ಮುತ್ತಿಗೆ ಹಾಕಿ ಕರಿ ಪತಾಕೆ ಪ್ರದರ್ಶನ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





ಮೂರು ನಾಲ್ಕು ಸಚಿವರು ವಾಹನದಲ್ಲಿ ತಾಜ್ ವಿವಾಂತ ಹೋಟೆಲ್ ನಿಂದ ಕದ್ರಿ ದೇವಸ್ಥಾನಕ್ಕೆ ತೆರಳುವಾಗ ದಾರಿ ಮಧ್ಯೆ ಪುರಭವನದ ಎದುರು ದಿಢೀರನೆ ಎಸ್ಡಿಪಿಐ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಅಲ್ಲದೆ ಕರಿ ಪತಾಕೆ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದರು.










