ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಆಯ್ಕೆ

ಮಂಗಳೂರು: ನಗರದ ಹೆಸರಾಂತ ಮೂತ್ರ ರೋಗ ತಜ್ಞ ಹಾಗೂ ಶಸ್ತ್ರ ಚಿಕಿತ್ಸಕ, ವೆನ್‌ಲಾಕ್ ಆಸ್ಪತ್ರೆಯ ಮೂತ್ರ ರೋಗ ವಿಭಾಗ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅವರು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಸಂಸ್ಥೆಯ ವಾರ್ಷಿಕ ಆಡಳಿತ ಮಂಡಳಿಯ ಚುನಾವಣೆ, ಚುನಾವಣಾ ಅಧಿಕಾರಿ ಡಾ. ವಿಕಾಸ್ ನೇತೃತ್ವದಲ್ಲಿ ನಡೆಯಿತು.

ಶಿವಮೊಗ್ಗ ನಗರದಲ್ಲಿ ಅ.23,24ರಂದು ನಡೆಯಲಿರುವ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಡಾ. ಪೂಜಾರಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಅಧ್ಯಕ್ಷರೂ ಆಗಿದ್ದಾರೆ. ಡಾ. ಪೂಜಾರಿ ಅವರು ರಾಜ್ಯ ಮಟ್ಟದ ಡಾ.ಬಿ.ಸಿ. ರೋಯ್ ಪ್ರಶಸ್ತಿ ಪುರಸ್ಕೃತರು.

ಭಾರತೀಯ ವೈದ್ಯಕೀಯ ಸಂಘವು ರಾಜ್ಯದಲ್ಲಿ ೧೭೫ ಶಾಖೆಗಳನ್ನು ಹೊಂದಿದ್ದು ಸುಮಾರು ೩೮,೦೦೦ ಸದಸ್ಯರನ್ನು ಒಳಗೊಂಡಿದೆ.

LEAVE A REPLY

Please enter your comment!
Please enter your name here