


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನ 21 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸೆ.5ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಕಿರಿಯ ಪ್ರಾಥಮಿಕ ವಿಭಾಗ:


ದಾಮೋದರ, ಸಹಶಿಕ್ಷಕರು, ಸ.ಕಿ.ಪ್ರಾ. ಶಾಲೆ ಸೇರ್ಕಳ (ಬಂಟ್ವಾಳ), ಚಿತ್ರಪ್ರಭಾ, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ ಮುಂಡ್ರುಪಾಡಿ (ಬೆಳ್ತಂಗಡಿ), ಉಮಾಲಕ್ಷ್ಮೀ, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ ಸ್ಯಾಂಡ್ ಪೀಟ್ (ಮಂಗಳೂರು ಉತ್ತರ), ಪ್ಲೇವಿ ಜೆಸಿಂತಾ ಮಿರಾಂದ, ಸಹಶಿಕ್ಷಕರು, ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬದ್ರಿಯಾನಗರ (ಮಂಗಳೂರು ದಕ್ಷಿಣ), ಶ್ರೀವಾಣಿ, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ ಪೆಂಚಾರು (ಮೂಡುಬಿದಿರೆ), ಮಾಲತಿ, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ ಹೊಸ್ತೋಟ (ಪುತ್ತೂರು), ಯಶೋಧರ ಕೆ., ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ ಪಾಂಡಿಗದ್ದೆ (ಸುಳ್ಯ).


ಹಿರಿಯ ಪ್ರಾಥಮಿಕ ವಿಭಾಗ:
ವಿದ್ಯಾಶಂಕರ್ ಡಿ., ಸಹಶಿಕ್ಷಕರು, ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ ವಿಟ್ಲ, ಬಂಟ್ವಾಳ (ಪ್ರಾಥಮಿಕ ವಿಭಾಗ), ಕೃಷ್ಣಪ್ಪ ಪೂಜಾರಿ, ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಅಂಡೆತಡ್ಕ (ಬೆಳ್ತಂಗಡಿ), ಇಂದಿರಾ ಎಸ್., ಸಹಶಿಕ್ಷಕರು, ದ.ಕ.ಜಿ.ಪ.ಹಿ.ಪ್ರಾ. ಶಾಲೆ ಕಾಟಿಪಳ್ಳ-03 (ಮಂಗಳೂರು ಉತ್ತರ), ಹರೀಶ್ ಕುಮಾರ್ ಬಿ.ಎಂ., ಸಹಶಿಕ್ಷಕರು, ಸ.ಉ.ಹಿ.ಪ್ರಾ.ಶಾಲೆ ಉಚ್ಚಿಲಗುಡ್ಡೆ (ಮಂಗಳೂರು ದಕ್ಷಿಣ), ಸುಕುಮಾರ್, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ ಪುಚ್ಚಮೊಗರು (ಮೂಡುಬಿದಿರೆ), ಮರಿಯಾ, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ (ಪುತ್ತೂರು), ಭುವನೇಶ್ವರಿ ಕೆ., ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ ಎಣ್ಮೂರು (ಸುಳ್ಯ).
ಪ್ರೌಢಶಾಲಾ ವಿಭಾಗ:
ವಿಜಯಲಕ್ಷ್ಮೀ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಮಂಚಿಕೊಳ್ಳಾಡು (ಬಂಟ್ವಾಳ), ರವೀಂದ್ರ ಕೆ., ಸಹಶಿಕ್ಷಕರು, ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ) ವೇಣೂರು (ಬೆಳ್ತಂಗಡಿ), ಪ್ರವೀಣ್ ಕುಟಿನ್ಹೋ, ಸಹಶಿಕ್ಷಕರು, ಸಂತ ಅಲೋಶಿಯಸ್ ಪ್ರೌಢಶಾಲೆ ಕೊಡಿಯಾಲ್ಬೈಲ್ (ಮಂಗಳೂರು), ಕಿಶೋರ್, ದೈಹಿಕ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಮುಚೂರು (ಮಂಗಳೂರು ದಕ್ಷಿಣ), ಜೋನ್ ರೊನಾಲ್ಡ್ ಡಿಸೋಜ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಮೂಡುಮಾರ್ನಾಡು (ಮೂಡುಬಿದಿರೆ), ತೋಮಸ್ ಎಂ.ಐ., ಸಹಶಿಕ್ಷಕರು, ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ (ಪುತ್ತೂರು), ಕಿಶೋರ್ ಕುಮಾರ್, ಸಹಶಿಕ್ಷಕರು, ಸ.ಪ.ಪೂ.ಕಾಲೇಜು (ಪ್ರೌ.ಶಾಲೆ ವಿಭಾಗ) ಅರಂತೋಡು (ಸುಳ್ಯ)
ಬಂಟ್ವಾಳದ ರೋಶನ್ ಅಲೆಕ್ಸಾಂಡರ್ಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರೌಢಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಶಿಕ್ಷಕ ರೋಶನ್ ಅಲೆಕ್ಸಾಂಡರ್ ಆಯ್ಕೆಯಾಗಿದ್ದಾರೆ. ಮೊಡಂಕಾಪು ಕಾರ್ಮಲ್ ಹೈಸ್ಕೂಲ್ ಸಹ ಶಿಕ್ಷಕ (ಗ್ರೇಡ್-II)ರಾಗಿರುವ ರೋಶನ್ ಅವರಿಗೆ ಸೆ.5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ರಾಜ್ಯಾದ್ಯಂತ ಒಟ್ಟು 20 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 11 ಪ್ರೌಢ ಶಾಲಾ ಶಿಕ್ಷಕರು (ಓರ್ವ ವಿಶೇಷ ಶಿಕ್ಷಕರು) ಈ ಸಾಲಿನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.







