ದಸರಾ ರಜೆ ಘೋಷಿಸಿದ್ದರೂ ದ.ಕ.ದಲ್ಲಿ ಮಳೆ ರಜೆ ಸರಿದೂಗಿಸಲು ಅ.7 ರವರೆಗೆ ತರಗತಿ

ಮಂಗಳೂರು : ರಾಜ್ಯ ಸರ್ಕಾರವು ಅ.3 ರಿಂದ 21 ರವರೆಗೆ ಶಾಲೆಗಳಿಗೆ ದಸರಾ ರಜೆ ಘೋಸಿದರೂ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ ಅ.7 ರವರೆಗೆ ತರಗತಿಗಳನ್ನು ಮುಂದುವರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಕಳೆದ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಶಾಲೆಗಳಿಗೆ ಕೆಲವು ದಿನ ರಜೆ ನೀಡಲಾಗಿತ್ತು.ಇದರಿಂದ ಆಗಿರುವ ಶೈಕ್ಷಣಿಕ ದಿನಗಳ ನಷ್ಟವನ್ನು ಸರಿದೂಗಿಸುವ ಸಲುವಾಗಿ,ದಸರಾ ರಜೆಯ ಆರಂಭಿಕ ದಿನಗಳಲ್ಲಿ ತರಗತಿ ನಡೆಸಲು ಅನುಮತಿ ನೀಡುವಂತೆ ಶಾಲಾಡಳಿತ ಮಂಡಳಿಗಳು ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ್ದವು .ಅದರಂತೆ ಅ.7 ರವರೆಗೆ ತರಗತಿ ನಡೆಸಲು ಡಿಡಿಪಿಐ ಆಂತರಿಕ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೋಷಕರಿಗೆ ಶಾಲೆಯಿಂದ ಸಂದೇಶ: ಆ.3 ರಂದು ಪೂರ್ವಾಹ್ನ ಹಾಗೂ ಅ.5 ರಿಂದ 7 ರವರಿಗೆ ಪೂರ್ಣ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕು ಎಂದು ಪುತ್ತೂರಿನಲ್ಲಿ ಈಗಾಗಲೇ ಹಲವು ಶಾಲೆಗಳಿಂದ ಮಕ್ಕಳ ಪೋಷಕರಿಗೆ ಮೊಬೆಲ್‌ ಸಂದೇಶ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here