ಹಬ್ಬದ ಸಮಯದಲ್ಲಿ ಪರೀಕ್ಷೆ ಬೇಡ: ಶಿಕ್ಷಣ ಸಂಸ್ಥೆಗಳಿಗೆ ಶಾಸಕರಾದ ಕಾಮತ್, ಭರತ್ ಮನವಿ – ಕಾಲೇಜಿಗೆ ಮನವಿ ಕೊಡಲು ಹೋದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ದಬ್ಬಾಳಿಕೆ ಆರೋಪ

ಮಂಗಳೂರು: ಪ್ರಮುಖ ಹಬ್ಬಗಳ ಸಂದರ್ಭ ಪರೀಕ್ಷೆ ನಡೆಸದಂತೆ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಶಾಸಕರು, ಭವಿಷ್ಯದಲ್ಲಿ ಇಂತಹ ವಿವಾದಗಳನ್ನು ತಪ್ಪಿಸಲು ನಾಗರ ಪಂಚಮಿ, ಅಷ್ಟಮಿ, ದಸರಾ ಮುಂತಾದ ಹಬ್ಬಗಳ ಸಂದರ್ಭ ಪರೀಕ್ಷೆಗಳನ್ನು ನಿಗದಿಪಡಿಸದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪೊಲೀಸ್ ದಬ್ಬಾಳಿಕೆ ಆರೋಪ:

​ಹಬ್ಬದ ದಿನಗಳಲ್ಲಿ ಪರೀಕ್ಷೆ ಮಾಡದಂತೆ ಮನವಿ ಸಲ್ಲಿಸಲು ಎಬಿವಿಪಿಯ ಕೆಲವು ಕಾರ್ಯಕರ್ತರು ಸೈಂಟ್ ಆಗ್ನಸ್ ಕಾಲೇಜಿಗೆ ತೆರಳಿದ್ದರು. ಆದರೆ ಮನವಿಗೆ ಅವಕಾಶ ನೀಡುವ ಮುನ್ನವೇ ಪೊಲೀಸರು ದಬ್ಬಾಳಿಕೆ ನಡೆಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ​ಅಲ್ಲದೆ, ಕಾಲೇಜಿನ ಹೆಣ್ಣುಮಕ್ಕಳು ಇದ್ದ ಜಾಗದಲ್ಲಿ ಮಹಿಳಾ ಪೊಲೀಸರನ್ನು ಕಳುಹಿಸದೆ, ಪುರುಷ ಪೊಲೀಸರನ್ನೇ ಬಳಸಿ ದಬ್ಬಾಳಿಕೆ ನಡೆಸಿರುವುದು ಸರಿಯಾ ಎಂದು ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಪ್ರಶ್ನಿಸಿದರು.

ಸೈಂಟ್ ಆಗ್ನೆಸ್ ಮಾತ್ರವಲ್ಲದೆ, ನಗರದ ಕೆನರಾ ಮತ್ತಿತರ ಕಾಲೇಜುಗಳಲ್ಲೂ ಸೋಮವಾರ ಪರೀಕ್ಷೆ ನಡೆಸಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೇದವ್ಯಾಸ ಕಾಮತ್, ಕೆನರಾ ಕಾಲೇಜಿನ ವಿದ್ಯಾರ್ಥಿಗಳಿಂದ ಈ ಕುರಿತು ದೂರು ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಕೆನರಾ ಕಾಲೇಜಿನಲ್ಲೂ ಹಬ್ಬದ ಸಮಯ ಪರೀಕ್ಷೆ ನಡೆಸಿದರೆ ಅಲ್ಲೂ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here