


ಮಂಗಳೂರು: ಉದ್ಯಮಿ, ರೋಹನ್ ಕಾರ್ಪೊರೇಶನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೋಂತೆತೊ ಅವರ ತಾಯಿ, ಮೂಡುಜೆಪ್ಪು, ಕೆಲರಾಯಿ ನಿವಾಸಿ ಹಾಗೂ ದಿ.ಗಿಲ್ಬರ್ಟ್ ಮೊಂತೆರೊ ಅವರ ಧರ್ಮಪತ್ನಿ ಪ್ರೆಸಿಲ್ಲಾ ಮೊಂತೆರೊ (81) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.


ಪ್ರಗತಿಪರ ಕೃಷಿಕರು ಮತ್ತು ಪರೋಪಕಾರಿ ಸ್ವಭಾವದವರಾಗಿದ್ದ ಅವರು, ನೆರೆಹೊರೆಯವರು ಹಾಗೂ ಪರಿಚಿತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ರೋಹನ್ ಮೋಂತೆರೊ ಸೇರಿ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ 14 ಮೊಮ್ಮಕ್ಕಳನ್ನು ಅಗಲಿದ್ದಾರೆ.


ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರವನ್ನು ಆ.21ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಕೆಲರಾಯಿಯ ಸಂತ ಅನ್ನಾ ಚರ್ಚ್ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಬೆಳಗ್ಗೆ 11 ಗಂಟೆಗೆ ಚರ್ಚ್ನಲ್ಲಿ ಪವಿತ್ರ ಬಲಿಪೂಜೆ ನೆರವೇರಲಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ.










