ಜಾನುವಾರು ಅಕ್ರಮ ಸಾಗಾಟ: ಇಬ್ಬರ ಬಂಧನ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿಯ ಬಪ್ಪನಾಡು ದ್ವಾರದ ಸಮೀಪದ ಚೆಕ್‌ ಪೋಸ್ಟ್ ಬಳಿ ಹಾವೇರಿಯಿಂದ ಕೇರಳದ ಕಾಸರಗೋಡು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ನಿವಾಸಿಗಳಾದ ಈಚರ್ ವಾಹನದ ಚಾಲಕ ಮಹಾಂತೇಶ್ (26) ಹಾಗೂ ನಿರ್ವಾಹಕ ರಾಜು (26) ಬಂಧಿತರು. ಹೆದ್ದಾರಿಯ ಬಪ್ಪನಾಡು ಚೆಕ್‌ ಪಾಯಿಂಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಈಚರ್ ವಾಹನದಲ್ಲಿ 13 ಕೋಣ, 1 ಎಮ್ಮೆ, 1 ಹಸು, 1 ಹೋರಿ ಸೇರಿದಂತೆ 16 ಜಾನುವಾರುಗಳನ್ನು ಪರವಾನಗಿ ಇಲ್ಲದೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಈಚರ್ ವಾಹನವನ್ನು ಮುಟ್ಟುಗೋಲು ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here