


ಮಂಗಳೂರು: ಮಕ್ಕಳ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ ‘ಶೌರ್ಯ’ ಸೆ.10ರಂದು ಬೆಳಗ್ಗೆ 10.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ತಪಸ್ಯಾ ಫೌಂಡೇಷನ್ನ ವ್ಯವಸ್ಥಾಪನಾ ಟ್ರಸ್ಟಿ ಹಾಗೂ ಲಯನ್ಸ್ ಜಿಲ್ಲೆ 317 ಡಿಯ ಮುಖ್ಯ ಸಂಯೋಜಕಿ ಸಬಿತಾ ರಾಮಾನಾಥ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.





ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಹಾಗೂ ತಪಸ್ಯ ಫೌಂಡೇಶನ್ ವತಿಯಿಂದ, ಕೆಎಂಸಿ ಆಸ್ಪತ್ರೆ, ಯೆನೆಪೊಯ ಮೆಡಿಕಲ್ ಕಾಲೇಜು, ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿ, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕಣಚೂರು ವಿಜ್ಞಾನ ಆಸ್ಪತ್ರೆ ಹಾಗೂ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಪ್ರಮುಖರಾದ ಗೋವರ್ಧನ್ ಕೆ.ಶೆಟ್ಟಿ, ಪ್ರಶಾಂತ್ ಬಿ.ಶೆಟ್ಟಿ, ವಿಜಯ ವಿಷ್ಣು ಮಯ್ಯ ಇದ್ದರು.








