ಸಚಿವ ಸಂಪುಟ ಸಭೆ: ನಗರ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಿಷೇಧ

ಮಂಗಳೂರು: ಮುಖ್ಯಮಂತ್ರಿ ಮತ್ತು ಸಂಪುಟ ದರ್ಜೆಯ ಸಚಿವರ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸೆ.17ರಂದು ಸಂಜೆ 4 ಗಂಟೆಯಿಂದ ಸೆ.19ರಂದು ಬೆಳಗ್ಗೆ 10 ಗಂಟೆತನಕ ಮಂಗಳೂರು ನಗರದ ಮೇರಿಹಿಲ್ ಹೆಲಿಪ್ಯಾಡಿನ ಸುತ್ತ, ಮುಖ್ಯಮಂತ್ರಿ ಅವರ ವಾಸ್ತವ್ಯದ ಹೋಟೇಲ್ ತಾಜ್ ವಿವಾಂತದ ಸುತ್ತ ಮತ್ತು ಸಚಿವ ಸಂಪುಟ ಸಭೆ ನಡೆಯುವ ಪಡೀಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಕಛೇರಿ ‘ಪ್ರಜಾಸೌಧ’ ದ ಸುತ್ತಲಿನ 1 ಕಿ.ಮೀಟರ್ ವ್ಯಾಪ್ತಿಯನ್ನು ’ತಾತ್ಕಾಲಿಕ ಕೆಂಪು ವಲಯ’ ಎಂದು ಘೋಷಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಯಾವುದೇ ಮಾದರಿಯ ಡ್ರೋಣ್ ಹಾರಾಟ, ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here