


ಮಂಗಳೂರು: ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಗೆ ಸಿದ್ಧತೆ ಅಂತಿಮ ಹಂತದಲ್ಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಪುಟ ಸಚಿವರು ಗುರುವಾರವೇ ಮಂಗಳೂರಿಗೆ ಆಗಮಿಸಲಿದ್ದಾರೆ.





ಸಿಎಂ ಮತ್ತು ಸಚಿವರಿಗಾಗಿ ನಗರದ ಹೊರವಲಯ ತಣ್ಣೀರುಬಾವಿ ಬೀಚ್ ನಲ್ಲಿ ಗುರುವಾರ ರಾತ್ರಿಯ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆಕರ್ಷಕ ದೀಪಾಲಂಕಾರದ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಈ ದಾರಿಯುದ್ದಕ್ಕೂ ಸ್ವಾಗತ ಕಮಾನುಗಳ ಅಳವಡಿಕೆ ಭರ್ಜರಿಯಾಗಿದೆ.


ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಚಿವರ ರಾತ್ರಿಯೂಟ ಹಾಗೂ ವಾಸ್ತವ್ಯಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ. ಕರಾವಳಿಯ ಜನಪ್ರಿಯ ಸಾಂಪ್ರದಾಯಿಕ ತಿನಿಸುಗಳು, ಮೀನಿನ ವೈವಿಧ್ಯಮಯ ಖಾದ್ಯಗಳ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಸಿಎಂ ಮತ್ತು ಸಚಿವರು ಸಾಗುವ ದಾರಿಯುದ್ದಕ್ಕೂ ರಸ್ತೆಗಳನ್ನು ದುರಸ್ತಿ ಮಾಡಲಾಗಿದ್ದು, ವಾಸ್ತವ್ಯ ಹೂಡಲಿರುವ ತಾಜ್ ವಿವಾಂತ ಮತ್ತಿತರ ಹೊಟೇಲ್ ಗಳಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.








