


ಮಂಗಳೂರು: ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನವನ್ನು ವಿನೂತನವಾಗಿ ಆಚರಿಸಲಾಯಿತು.





ಹಿರಿಯ ಫಾರ್ಮಸಿ ಅಧಿಕಾರಿಗಳಾದ ಸಂಧ್ಯಾ, ಮಹಾಲಕ್ಷ್ಮಿ, ಲಾವಣ್ಯ, ಮೋಹನ್ ದಾಸ್, ಪುಷ್ಪಲತಾ, ರೇಖಾ ಅಲ್ಲದೆ ಕಿರಿಯ ಫಾರ್ಮಸಿಸ್ಟ್ ಗಳಾದ ಅಕ್ಷತಾ, ರಿಶಾನಾ, ಸಕೀನಾ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.


ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, ಫಾರ್ಮಸಿ ಅಧಿಕಾರಿಗಳಲ್ಲಿ ವೃತ್ತಿ ನೈಪುಣ್ಯತೆಯ ಅಗತ್ಯ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ತಿಳಿಹೇಳಿದರು. ಅನುಭವಿ ಫಾರ್ಮಸಿಸ್ಟ್ ಗಳ ಪ್ರೇರಣಾದಾಯಕ ಮನೋಭಾವನೆಯಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಾರ್ವತ್ರಿಕ ಮೆಚ್ಚುಗೆ ಗಳಿಸಿದ ವಿಶಾಲವಾದ ಫಾರ್ಮಸಿ ಮತ್ತು ಮುಖ್ಯ ಉಗ್ರಾಣವನ್ನು ಪ್ರಾರಂಭಿಸಲು ಸಾಧ್ಯವಾಗಿದೆ ಎಂದರು.
ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಅವರು ಫಾರ್ಮಸಿ ಅಧಿಕಾರಿಗಳ ಸಮರ್ಪಣಾ ಮನೋಭಾವವನ್ನು ತಿಳಿಸಿದರು. ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದ ಫಾರ್ಮಸಿ ಅಧಿಕಾರಿಗಳು, ಇದುವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಹಿಂದೆಂದೂ ಕಾಣದಿರುವ ಹಾಗೂ ತಮ್ಮನ್ನು ಗೌರವಿಸಿ ಪುರಸ್ಕರಿಸಿದ ಈ ಕ್ಷಣ ಚಿರಸ್ಮರಣೀಯ ಎಂದರು.
ವೇದಿಕೆಯಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ. ದಯಾನಂದ್, ಮಕ್ಕಳ ತಜ್ಞೆ ಡಾ.ಮನಿಷಾ, ಸಹಾಯಕ ಆಡಳಿತಾಧಿಕಾರಿ ಅನಿತಾ ಸತ್ಯನ್, ನರ್ಸಿಂಗ್ ಸುಪರಿಂಟೆಂಡೆಂಟ್ ಗೀತಾ, ಕೆ.ಎಂ.ಸಿ. ನರ್ಸಿಂಗ್ ಸುಪರ್ ವೈಸರ್ ಮಲ್ಲಿಕಾ, ಆಫೀಸ್ ಸುಪರಿಂಟೆಂಡೆಂಟ್ ಶಂಕರ್ ಇದ್ದರು.
ಶುಶ್ರೂಷಾಧಿಕಾರಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶುಶ್ರೂಧಿಕಾರಿ ಮಹಾಲಕ್ಷ್ಮೀ ಸ್ವಾಗತಿಸಿದರು. ಶುಶ್ರೂಷಾಧಿಕಾರಿ ಸರೋಜಾ ವಂದಿಸಿದರು. ಅಪೂರ್ವ ಪ್ರಾರ್ಥನೆಗೈದರು. ಭವ್ಯಾ ಮತ್ತು ಹೇಮಂತ್ ತಾಂತ್ರಿಕ ಸಹಕಾರ ನೀಡಿದರು.








