ಸಮೀಕ್ಷೆ ಕುರಿತು ಬಿಜೆಪಿ ಟೀಕೆಗೆ ಖಾದರ್ ತಿರುಗೇಟು

ಮಂಗಳೂರು: ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಬರ, ನೆರೆ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆಯನ್ನು ಟೀಕಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ನೆಲದ ಮೇಲೆ ಹೋಗಿ ವೀಕ್ಷಿಸುವುದಕ್ಕಿಂತ ಆಕಾಶ ಮಾರ್ಗದಿಂದ ವೀಕ್ಷಿಸಿದಾಗ ಇಡೀ ಪ್ರದೇಶದ ಪ್ರವಾಹ ಹಾಗೂ ಹಾನಿಯ ಸಂಪೂರ್ಣ ಚಿತ್ರಣ ದೊರೆಯುತ್ತದೆ. ಇದು ಸಣ್ಣ ಮಗುವಿಗೂ ತಿಳಿಯುವ ವಿಷಯ. ಬಿಜೆಪಿಯವರ ಇಂತಹ ಹೇಳಿಕೆಗಳಿಗೆ ನಾವು ನಾವು ಮಹತ್ವ ನೀಡುವುದಿಲ್ಲ ಎಂದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ನೋಡಿ ರಾಜಕೀಯ ಮಾಡುವುದಿಲ್ಲ. ವಿಪತ್ತು ಮತ್ತು ಪರಿಹಾರದಂತಹ ವಿಚಾರಗಳಲ್ಲಿ ವಿರೋಧ ಪಕ್ಷಗಳು ಸಣ್ಣತನದ ರಾಜಕೀಯ ಮಾಡಬಾರದು. ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದೇ ಸರ್ಕಾರದ ಮುಖ್ಯ ಆದ್ಯತೆ ಎಂದು ಹೇಳಿದರು.

ದೇಶದ ಪ್ರಧಾನಮಂತ್ರಿ, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ನಮ್ಮದೇ ರಾಜ್ಯದ ಹಿಂದಿನ ಸಿಎಂಗಳು ಪ್ರಕೃತಿ ವಿಕೋಪ ಸಂಭವಿಸಿದಾಗ ವೈಮಾನಿಕ ಸಮೀಕ್ಷೆ ನಡೆಸಿದ್ದನ್ನು ಎಲ್ಲರೂ ನೋಡಿದ್ದಾರೆ. ವಿಪಕ್ಷಗಳು ಇಂಥ ವಿಷಯದಲ್ಲೂ ರಾಜಕೀಯ ಮಾಡುವುದು ಸಲ್ಲದೆ ಎಂದು ಖಾದರ್ ಹೇಳಿದರು.

LEAVE A REPLY

Please enter your comment!
Please enter your name here