


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪದ ಅಸೈಗೊಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (ಕೆಎಸ್ಆರ್ಪಿ) ಕಾರ್ಯ ನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಅವರ ಪುತ್ರಿ ವಿನಂತಿ ಈಶ್ವರ ಹರಿಕಾಂತ ಅವರು ಪ್ರತಿಷ್ಠಿತ ಶ್ರೀ ಚಾಮುಂಡೇಶ್ವರಿ ಬಾಲ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.





ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಮೈಸೂರು ದಸರಾ ಅಂಗವಾಗಿ ನೀಡಲಾಗುವ ಈ ಪ್ರಶಸ್ತಿಗೆ ವಿನಂತಿ ಈಶ್ವರ್ ಹರಿಕಾಂತ ಆಯ್ಕೆಯಾಗಿದ್ದು, ಅವರ ಸಾಂಸ್ಕೃತಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಅ.18ರಂದು ಮೈಸೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಮೈಸೂರು ಸಿರಿ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ವಿನಂತಿ ಈಶ್ವರ ಹರಿಕಾಂತ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈಕೆ ಕೆ.ಎಸ್.ಆರ್.ಪಿ. ಹೆಡ್ ಕಾನ್ಸ್ಟೆಬಲ್ ಈಶ್ವರ್ ಹರಿಕಾಂತ ಹಾಗೂ ಆರತಿ ಅವರ ಪುತ್ರಿ.










